ಮೂಸುಂಬಿ ಹಣ್ಣಿನ ರುಚಿಕರ ಖಾದ್ಯಗಳು
ಮೂಸುಂಬಿ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗಿ ಬಾಯಾರಿಕೆ ನೀಗುವುದು. ಹೃದಯ ದೌರ್ಬಲ್ಯವುಳ್ಳವರಿಗೆ ಈ ಹಣ್ಣು ಒಳ್ಳೆಯದು. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.ಮೂಸುಂಬಿ ಹಣ್ಣಿನ ಗೊಜ್ಜು
ಬೇಕಾಗುವ ವಸ್ತುಗಳು: ಒಂದು ಕಪ್ ಸಿಪ್ಪೆ ಬೀಜ ತೆಗೆದ ಮೂಸುಂಬಿ ಹಣ್ಣಿನ ತಿರುಳು, 2 ಹಸಿಮೆಣಸು, 2 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಒಣಮೆಣಸು, ಚಿಟಿಕಿ ಇಂಗು, 1 ಚಮಚ ಎಣ್ಣೆಮಾಡುವ ವಿಧಾನ: ಮೂಸುಂಬಿ ಹಣ್ಣಿನ ತಿರುಳನ್ನು ಹಬೆಯಲ್ಲಿ ಬೇಯಿಸಿ ನುಣ್ಣಗೆ ರುಬ್ಬಿ. ಅದಕ್ಕೆ ಉದ್ದಕ್ಕೆ ತುಂಡುಮಾಡಿದ ಹಸಿಮೆಣಸು, ಬೆಲ್ಲ, ಉಪ್ಪು ಹಾಕಿ ರಸವನ್ನು ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಇಂಗು ಮತ್ತು ಒಣಮೆಣಸಿನ ತುಂಡು ಹಾಕಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಈ ಗೊಜ್ಜು ತಿನ್ನಲು ರುಚಿಯಾಗಿರುತ್ತದೆ.
ಮೂಸುಂಬಿ ಸಿಪ್ಪೆ ಚಟ್ನಿ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಮೂಸಂಬಿ ಹಣ್ಣಿನ ಸಿಪ್ಪೆ, ಒಣಮೆಣಸು, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಕೆಂಪಗೆ ಹುರಿದು, ಕೊನೆಗೆ ತೆಂಗಿನ ತುರಿ ಹಾಕಿ ಸ್ವಲ್ಪ ಹುರಿದು, ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ಬೆಲ್ಲ ಮತ್ತು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ನಂತರ ತುಪ್ಪದಲ್ಲಿ ಸಾಸಿವೆ, ಇಂಗು ಮತ್ತು ಕರಿಬೇವಿನೆಲೆಯ ಒಗ್ಗರಣೆ ಕೊಡಿ. ವಿಶಿಷ್ಟ ರುಚಿಯ ಈ ಚಟ್ನಿ ದೋಸೆ, ಇಡ್ಲಿ, ಅನ್ನದೊಂದಿಗೆ ಸವಿಯಲು ರುಚಿ.
ಮೂಸುಂಬಿ ಹಣ್ಣಿನ ಭಾತ್
ಬೇಕಾಗುವ ವಸ್ತುಗಳು: ಎರಡು ಕಪ್ ಸಿಪ್ಪೆ ಬೀಜ ತೆಗೆದ ಮೂಸುಂಬಿ ಹಣ್ಣಿನ ತಿರುಳು, 1/2 ಕಪ್ ಬೆಳ್ತಿಗೆ ಅಕ್ಕಿ, 1/2 ಚಮಚ ಜೀರಿಗೆ, ಕಾಲು ಚಮಚ ಮೆಂತೆ, 4-5 ಒಣಮೆಣಸು, 3 ಚಮಚ ಕೊಬ್ಬರಿ ತುರಿ, 1 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ತುಪ್ಪ, 1/2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಕಡಲೆಬೇಳೆ, 1/2 ಚಮಚ ಉದ್ದಿನಬೇಳೆ, ಸ್ವಲ್ಪ ಕೊತ್ತಂಬರಿಸೊಪ್ಪು