ಸೇಬಿನ ರುಚಿಕರ ಅಡುಗೆಗಳು
ಸೇಬು ಮಲಬದ್ಧತೆಗೆ ಉತ್ತಮ ಔಷಧಿ. ಹೊಟ್ಟೆವಾಯು, ಯೂರಿಕ್ ಆಮ್ಲದ ಕೆಡುಕಿನಿಂದ ಬರುವ ವಾತ, ಕರುಳುಗಳಲ್ಲಿನ ಕೀಟಾಣುಗಳ ನಾಶ ಇವುಗಳಿಗೆ ಸೇಬು ಔಷಧಿ. ಹೃದಯ ಮಿದುಳು ಮತ್ತು ಶ್ವಾಸಕೋಶಗಳಿಗೆ ಶಕ್ತಿ ಹಾಗೂ ಮಾಂಸಖಂಡಗಳಿಗೆ ಬಲವನ್ನು ಕೊಡುತ್ತದೆ.
ಸೇಬಿನ ಗೊಜ್ಜು

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಜೀರಿಗೆ ಹಾಕಿ ಸಿಡಿದಾಗ ಇಂಗು ಕರಿಬೇವಿನೆಲೆ ಹಾಕಿ . ನಂತರ ಸ್ವಲ್ಪ ನೀರು, ಹುಳಿ ರಸ, ಬೆಲ್ಲ, ಸೇಬಿನ ಚೂರು, ರಸಂ ಪುಡಿ ಮತ್ತು ಉಪ್ಪು ಹಾಕಿ ಐದು ನಿಮಿಷ ಕುದಿಸಿ ನಂತರ ಒಲೆಯಿಂದ ಇಳಿಸಿ. ಅನ್ನದೊಂದಿಗೆ ಸವಿಯಲು ಈ ಗೊಜ್ಜು ರುಚಿಯಾಗಿರುತ್ತದೆ.
ಸೇಬಿನ ಕೇಸರಿಭಾತ್

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ. ಬಿಸಿಯಾದಾಗ ರವೆ ಹಾಕಿ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ 3 ಕಪ್ ನೀರು ಹಾಕಿ ಕುದಿಯಲು ಆರಂಭವಾದಾಗ ಹುರಿದ ರವೆ ಹಾಕಿ. ರವೆ ಬೆಂದ ಮೇಲೆ ಸೇಬಿನ ಪೇಸ್ಟ್ ಹಾಕಿ. ಮಿಶ್ರಣ ಚೆನ್ನಾಗಿ ಬೆರೆತಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದ ಮೇಲೆ ತುಪ್ಪ ಹಾಕಿ. ಹಾಲಲ್ಲಿ ನೆನೆಸಿದ ಕೇಸರಿ ಹಾಕಿ ನಂತರ ತುಪ್ಪ ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬಂದಾಗ, ತುಪ್ಪದಲ್ಲಿ ಹುರಿದ ದ್ರಾಕ್ಷೆ ಗೋಡಂಬಿ ನಂತರ ಏಲಕ್ಕಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ಘಮಘಮಿಸುವ ಸೇಬಿನ ಕೇಸರಿಭಾತನ್ನು ಸವಿಯಿರಿ.
ಸೇಬಿನ ಸಿಹಿ ಅನ್ನ
ಬೇಕಾಗುವ ವಸ್ತುಗಳು : 1 ಸೇಬು ಹಣ್ಣು, 5-6 ಮುಸುಂಬಿ ಸೊಳೆ, 1 ಕಪ್ ಅನ್ನ, 1/2 ಕಪ್ ಸಕ್ಕರೆ, 1/4 ಕಪ್ ತುಪ್ಪ, 1 ಚಮಚ ಕಡಲೆಬೇಳೆ, 1/2 ಚಮಚ ಜೀರಿಗೆ, ಸಣ್ಣ ತುಂಡು ಕೆಂಪು ಮೆಣಸು, 7-8 ಗೋಡಂಬಿ, 10-12 ಒಣದ್ರಾಕ್ಷೆ, ಕೇಸರಿ ದಳ ಸ್ವಲ್ಪ, ಚಟಿಕಿ ಉಪ್ಪು, 2 ಹನಿ ನಿಂಬೆರಸ.
